ಜೋಗಿ ಪ್ರೇಮ್ ಗಾಗಿ ತನ್ನ ನಿಯಮವನ್ನ ಮುರಿದ ನಟ ದರ್ಶನ್ | Filmibeat Kannada

2017-12-19 3,638

Challenging Star Darshan breaks his rules for Jogi Prem. Darshan and Director Jogi Prem combination movie titled as 'Anjaneya'. And Darshan gave 85 days call sheet to director Jogi Prem. Producer Umapathi will be producing the movie.


ನಟ ದರ್ಶನ್ ಸದ್ಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಬಿಜಿ ಇದ್ದಾರೆ. 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಾಗಿ ಅಬ್ಬರಿಸಿರುವ ದರ್ಶನ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ ತಮ್ಮ ಫ್ಯಾನ್ಸ್ ಗಳಿಗೆ ದರ್ಶನ್ ಈಗ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ. ಈ ಹಿಂದೆಯೇ ನಿರ್ದೇಶಕ ಪ್ರೇಮ್ ಜೊತೆ ದರ್ಶನ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಆ ಸುದ್ದಿ ಪಕ್ಕಾ ಆಗಿದೆ. 'ಕುರುಕ್ಷೇತ್ರ' ನಂತರ ದರ್ಶನ್ ನಿರ್ದೇಶಕ ಪ್ರೇಮ್ ಗ್ಯಾಂಗ್ ಸೇರಲಿದ್ದಾರೆ. ಈ ಹಿಂದೆ 'ಕರಿಯ' ಸಿನಿಮಾ ಮಾಡಿದ್ದ ಈ ಜೋಡಿ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರೇಮ್ ಗಾಗಿ ದರ್ಶನ್ ತಮ್ಮ ಹಳೆಯ ನಿಯಮವನ್ನು ಕೈ ಬಿಟ್ಟಿದ್ದಾರೆ. ದರ್ಶನ್ 'ತಾರಕ್' ಚಿತ್ರದ ಸಂಧರ್ಭದಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದರು. ''ಇನ್ನು ಮುಂದೆ ಐತಿಹಾಸಿಕ ಅಥಾವ ಪೌರಾಣಿಕ ರೀತಿಯ ಸಿನಿಮಾವನ್ನು ಬಿಟ್ಟು ಬೇರೆ ಸಿನಿಮಾಗಳಿಗೆ ಹೆಚ್ಚು ಅಂದರೆ 65 ದಿನ ಕಾಲ್ ಶೀಟ್ ನೀಡುತ್ತಾನೆ'' ಎಂದಿದ್ದರು. ಅದೇ ರೀತಿ 'ತಾರಕ್' ಸಿನಿಮಾ 65 ದಿನಗಳ ಒಳಗೆ ಚಿತ್ರೀಕರಣ ಮುಗಿದಿತ್ತು.